=>2020 ರಿಂದ ಹೊಸ ಕಿಡ್ ಮಾಡೆಲ್ ಆಗಿ ಆಯ್ಕೆಯಾದ ಸನ್ಮಿತಾಳಿಗೆ ಇನಿಹಾ ನೆಟ್ ಸಂಸ್ಥೆಯಿಂದ ಕಿಡ್ ಮಾಡೆಲ್ ಗೆ ಸಿಗುವ ಎಲ್ಲಾ ಫೆಸಿಲಿಟಿಗಳು ಹಂತ ಹಂತವಾಗಿ ಸಿಗಲಿದೆ.
Updated: 10-02-2020
..............................................................
=>2019 ರ ಬ್ಯಾಚ್ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಬಂದಿರುತ್ತದೆ. ಈ ಕೂಡಲೇ ಇನಿಹಾ ನೆಟ್ ಸಂಸ್ಥೆಗೆ ಹೋಗಿ ನಿಮ್ಮ ಪ್ರಮಾಣ ಪತ್ರ ಪಡೆದುಕೊಳ್ಳಿ ಹಾಗೆ ಇನಿಹಾ ನೆಟ್ ವೆಬ್ ನಲ್ಲಿ ಪ್ರಮಾಣ ಪತ್ರವನ್ನು ಪರಿಶೀಲಿಸಿಕೊಳ್ಳಬಹುದು. ..............................................................
Updated: 10-02-2020
..............................................................
..............................................................
=> "ಕಿಡ್ ಮಾಡೇಲ್ ಅವಾರ್ಡ್ 2020" ಓಟಿಂಗ್ ಲೈನ್ ದಿನಾಂಕ 30-01-2020 ರ ಬೆಳಗ್ಗೆ 8:30 ಕ್ಕೆ ಕೊನೆಗೊಳ್ಳಲಿದೆ. ಈ ಬಗ್ಗೆ ಸಾಂಸ್ಕೃತಿಕಾ ವಿಭಾಗ ಸ್ಪಷ್ಟನೆ ನೀಡಿದ್ದು ನಂತರ ಅಫೀಶಿಯಲ್ ಕೌಂಟಿಂಗ್ ಪ್ರಕ್ರಿಯೆ ಮುಂದುವರೆಯುತ್ತದೆ. ಅತೀ ಹೆಚ್ಚು ಸಾರ್ವಜನಿಕ ವಲಯದಿಂದ ಓಟ್ ಸಂಪಾದಿಸಿರುವ "ಕಂಟೆಸ್ಟೆಂಟ್" ವಿನ್ನರ್ ಆಗುತ್ತಾಳೆ.
Updated: 28-01-2020
..............................................................
=> "ಚಿತ್ತ ವಿಸ್ತಾರ (ಹಿಂದಿ)" ಕಾರ್ಯಕ್ರಮದ ನಿರ್ಮಾಣ ಕಾರ್ಯದಲ್ಲಿ ದೊಡ್ಡ ಮಟ್ಟಿನ ಲೋಪದೋಷಗಳು ಕಂಡು ಬಂದಿದ್ದು ವಿಡಿಯೋ ಮತ್ತು ಆಡಿಯೋ ಮಿಸ್ಮ್ಯಾಚ್ ಆಗುತ್ತಿದೆ. ಕನ್ನಡ ವಿಡೀಯೋ ಗೆ ಹಿಂದಿ ಆಡಿಯೋ ಲೆಂತ್ (ಉದ್ದ) 25 ರಿಂದ 40 ಸೆಕೆಂಡ್ ವ್ಯತ್ಯಾಸ ಕಂಡು ಬಂದಿದ್ದು ಸಂಕಲನ ಪ್ರಕ್ರಿಯೆಯಲ್ಲಿ ತೀವ್ರ ಹಿನ್ನಡೆಯಾಗಿದೆ. ಈ ಬಗ್ಗೆ ನಮ್ಮ ಸಾಂಸ್ಕೃತಿಕಾ ವಿಭಾಗ ಪರಿಹಾರವನ್ನು ಕಂಡುಕೊಂಡಿದ್ದು, ಹಿಂದಿಯಲ್ಲಿ ವೀಡಿಯೋ ಮರು ಚಿತ್ರೀಕರಣವನ್ನು ಇನಿಹಾ ನೆಟ್ ಸಂಸ್ಥೆಯಲ್ಲಿ ಆಯೋಜಿಸಲು ಮುಂದಾಗಿದೆ. ಆದರೆ ಇದು ವಿದ್ಯಾರ್ಥಿಗಳ ಮತ್ತು ಅವರ ಪೋಷಕರ ನಿರ್ಧಾರದ ಮೇಲೆ ಅವಲಂಬಿತವಾಗಿರುವುದರಿಂದ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಹಮತ ನೀಡಿದರೆ ಮಾತ್ರ ಇದರ ಮುಂದಿನ ಪ್ರಕ್ರಿಯೆ ನಡೆಯಲಿದೆ. ಇಲ್ಲವಾದಲ್ಲಿ ಈ ಪ್ರಕ್ರಿಯೆಯನ್ನು ಅಂದರೆ ಚಿತ್ತ ವಿಸ್ತಾರ ಹಿಂದಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಸಂಸ್ಥೆ ಮುಂದಾಗಲಿದೆ.
Updated: 25-01-2020
..............................................................
=> "ಕಿಡ್ ಮಾಡೇಲ್ ಅವಾರ್ಡ್ 2020" ಫಲಿತಾಂಶ ಫೆಬ್ರವರಿ 4 ಕ್ಕೆ ಎಲಿಮಿನೇಶನ್ ಹಾಗೂ ಫೆಬ್ರವರಿ 5 ಕ್ಕೆ ವಿನ್ನರ್ ಹಾಗೂ ರನ್ನರ್ ಪ್ರಕಟವಾಗಲಿದೆ. ಕಿಡ್ ಮಾಡೆಲ್ ಅವಾರ್ಡ್ ವಿನ್ನರ್ ಹಾಗೂ ರನ್ನರ್ ಗೆ "ರೇಡಿಯೋ ನಿನಾದ 90.4FM" ಉಜಿರೆಯಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.
Updated: 23-01-2020
..............................................................
=> "ಕಿಡ್ ಮಾಡೇಲ್ ಅವಾರ್ಡ್ 2020" ವೋಟಿಂಗ್ ವೆಬ್ಸೈಟ್ ಸರ್ವರ್ ಬ್ಯುಸಿಯಾಗಿರುವುದರಿಂದ ಕಿಡ್ ಮಾಡೆಲ್ ಕಂಟೆಸ್ಟೆಂಟ್ ಮಗುವಿನ ಪೋಷಕರಿಗೆ ವೋಟ್ ಮಾಡಿದ ರಿಪೋರ್ಟ್ ಪೇಜ್ ಸದ್ಯಕ್ಕೆ ನೋಡಲು ಸಾಧ್ಯವಾಗುತ್ತಿಲ್ಲ. ಸದ್ಯದಲ್ಲೇ ವ್ಯವಸ್ಥೆ ಮಾಡುತ್ತಿದ್ದೇವೆ.
Updated: 16-01-2020
..............................................................
=> ನಮ್ಮ ಇನಿಹಾ ನೆಟ್ ಸಂಸ್ಥೆ ಆಯೋಜನೆಯ "ಕಿಡ್ ಮಾಡೇಲ್ ಅವಾರ್ಡ್ 2020" ರ ಅಂತಿಮ ಹಂತದ ಪ್ರಕ್ರಿಯೆ ಆನ್ಲೈನ್ ಓಟಿಂಗ್ ಇಂದು ಸಂಜೆ 4:30 ಕ್ಕೆ "ನಮ್ಮ ಸಾಂಸ್ಕೃತಿಕಾ ವಿಭಾಗದ" ವೆಬ್ ನಲ್ಲಿ ಆರಂಭವಾಗಲಿದೆ. ಈ ಬಗ್ಗೆ ಸಾಂಸ್ಕೃತಿಕಾ ವಿಭಾಗದ ಸ್ಟಷ್ಟನೆ ಬಂದಿದ್ದು ಓಟಿಂಗ್ ಗೆ ಬೇಕಾದ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡಿದೆ. ಅಂತಿಮ ಹಂತಕ್ಕೆ ಆಯ್ಕೆಯಾದ ಪುಟಾಣಿ ಮಕ್ಕಳಿಗೆ ಪರೀಕ್ಷಾ ಸಮಿತಿಯ ಪರವಾಗಿ ಶುಭ ಹಾರೈಕೆಗಳು.
Updated: 16-01-2020
..............................................................
=> ಇನಿಹಾ ನೆಟ್ ಸಂಸ್ಥೆಯಲ್ಲಿ ಈಗಾಗಲೆ Certificate Course in MS office ತರಬೇತಿಯನ್ನು ಪಡೆದ (ಪ್ರಮಾಣ ಪತ್ರ ಪಡೆದ) Pre metric ವಿದ್ಯಾರ್ಥಿಗಳು SSLC ಮುಗಿದ ಬಳಿಕ DCA ಕೋರ್ಸ್ನ್ನು ಉಚಿತವಾಗಿ ಪಡೆಯಲು ಅರ್ಹರಾಗಿರುತ್ತಾರೆ, ಪರೀಕ್ಷಾ ಶುಲ್ಕ ಪಾವತಿಸಲು ಇರುತ್ತದೆ. ಮುಂದೆ ಯಾವುದೇ ಕೆಲಸಗಳಿಗೆ ಸೇರುವಾಗ DCA ಪ್ರಮಾಣ ಪತ್ರ ಅಗತ್ಯವಾಗಿರುವುದರಿಂದ ಈ ಅವಕಾಶವನ್ನು ಕಲ್ಪಿಸಲಾಗಿದೆ. ಹಾಗೆ ಈ ಬಗ್ಗೆ ಸಂಸ್ಥೆಯ ಪರೀಕ್ಷಾ ವಿಭಾಗ (ECM) ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಿಲ್ಲ. ಯಾಕೆಂದರೆ ಇದು ವಿದ್ಯಾರ್ಥಿಗಳ ಇಚ್ಛೆಗೆ ಬಿಟ್ಟಿದ್ದು.
ಈ ಬಗ್ಗೆ ಮಾಹಿತಿಯನ್ನು ದಿನಾಂಕ 12-01-2020 ರಂದು ಇನಿಹಾ ನೆಟ್ ಸಂಸ್ಥೆಯಲ್ಲಿ ತಿಳಿಸಲಾಗುವುದು.
Updated: 09-01-2020
..............................................................
=> ನಿನ್ನೆ (05-01-2020) ನಡೆದ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಫಲಿತಾಂಶವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Updated: 06-01-2020
..............................................................
=> ಈ ತಿಂಗಳಲ್ಲಿ (ಡಿಸೆಂಬರ್ ನಲ್ಲಿ) ನಡೆದ ಎಲ್ಲಾ ಪರೀಕ್ಷೆಗಳ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ.
Updated: 30-12-2019
..............................................................
=> ದಿನಾಂಕ 05-11-2020 ರಂದು INFD ಖಾತೆ ಹೊಂದಿರುವ ವಿದ್ಯಾರ್ಥಿಗಳು ಇನಿಹಾ ನೆಟ್ ಸಂಸ್ಥೆಗೆ ಭೇಟಿ ನೀಡಲು ಸೂಚಿಸಿದೆ. 2020 ರ INFD earning ಬಗ್ಗೆ ವಿಶೇಷ ಮಾಹಿತಿಯನ್ನು ಹೇಳಲಾಗುತ್ತದೆ. ಗೈರು ಹಾಜರಾಗುವ INFD ಖಾತೆ ಹೊಂದಿರುವ ವಿದ್ಯಾರ್ಥಿಗಳ ಖಾತೆಗಳು ಸ್ವಯಂ ಚಾಲಿತವಾಗಿ ನಿಷ್ಕ್ರಿಯಗೊಳ್ಳಲಿದೆ. ಹಾಗಾಗಿ ತಪ್ಪದೇ ಹಾಜರಾಗುವಂತೆ ಸೂಚಿಸಲಾಗಿದೆ.
Updated: 28-12-2019
..............................................................
=> ತಾಂತ್ರಿಕ ಕೆಲಸದ ಕಾರಣ ನಾಳೆ (ಭಾನುವಾರ 29-12-2019) ಇನಿಹಾ ನೆಟ್ ಸಂಸ್ಥೆಗೆ ರಜೆಯನ್ನು ನೀಡಲಾಗಿದೆ.
Updated: 28-12-2019
..............................................................
=> ಮುಂದಿನ ಶೈಕ್ಷಣಿಕ ವರ್ಷದಿಂದ ಕಂಪ್ಯೂಟರ್ ಕಲಿಕೆಯ ಜೊತೆಗೆ ಪೂರಕವಾಗಿ ಇಂಗ್ಲೀಷ್ ಭಾಷೆ ಕಲಿಕೆಗೂ ಆದ್ಯತೆಯನ್ನು ನೀಡುವ ನಿಟ್ಟಿನಲ್ಲಿ ಹೊಸ ಪ್ರಯತ್ನವನ್ನು ಮಾಡುವ ನಿರ್ಧಾರವನ್ನು ಇಸಿಎಂ ಮುಂದಾಗಿದೆ. ಇದರ ಅನ್ವಯ ಮುಂದಿನ ಶೈಕ್ಷಣಿಕ ವರ್ಷದಿಂದ ಇನಿಹಾ ನೆಟ್ ಸಿಬ್ಬಂದಿಗಳು ವಿದ್ಯಾರ್ಥಿಗಳ ಜೊತೆಗೆ ಸಾಧ್ಯವಾದಷ್ಟು ಇಂಗ್ಲೀಷ್ ಭಾಷೆಯಲ್ಲೇ ವ್ಯವಹರಿಸುವಂತೆ ತಿಳಿಸಲಾಗಿದೆ. ಇದರಿಂದ ಸಂಸ್ಥೆಗೆ ಬರುವ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಭಾಷಾ ಜ್ಞಾನ ಹೆಚ್ಚಲಿದೆ.
Updated: 21-12-2019
..............................................................
=>ಇದೇ ಭಾನುವಾರ ನಡೆಯಬೇಕಿದ್ದ ವಾರ್ಷಿಕ ಪರೀಕ್ಷೆಯನ್ನು ಜನವರಿ 5, 2020 ಕ್ಕೆ ಹಾಗೂ ಸ್ಪೆಷಲ್ ಪರೀಕ್ಷೆಯನ್ನು ಜನವರಿ 6, 2020 ಕ್ಕೆ ಮುಂದೂಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಕಂಪ್ಯೂಟರ್ ಶಿಕ್ಷಕರನ್ನು ಸಂಪರ್ಕಿಸಿ.
Updated: 19-12-2019
..............................................................
=> ಮುಂದಿನ ವರ್ಷದಿಂದ ವಿದ್ಯಾರ್ಥಿಗಳ ಅನುಕೂಲತೆಗೆ ಅನ್ವಯವಾಗುವಂತೆ ಹೊಸ ತರಬೇತಿ ವಿಧಾನವನ್ನು ಅನುಸರಿಸುವ ತೀರ್ಮಾನವನ್ನು ಪರೀಕ್ಷಾ ಸಮಿತಿ ಮಾಡಿದ್ದು DTS ಹಾಗೂ ಪರೀಕ್ಷೆಯಲ್ಲಿ ಸೆಮಿಸ್ಟರ್ ಮಾದರಿಯನ್ನು ಅಳವಡಿಸಲು ಮುಂದಾಗಿರುತ್ತದೆ.
Updated: 19-12-2019
..............................................................
=>ಇದೇ ಭಾನುವಾರ ನಡೆಯಲಿರುವ ವಾರ್ಷಿಕ ಪರೀಕ್ಷೆಗೆ ಸಂಬಂಧಪಟ್ಟ ವಿದ್ಯಾರ್ಥಿಗಳು ಹಾಜರಾಗುವಂತೆ ಹಾಗೂ ಪೂರ್ವ ಅಭ್ಯಾಸಕ್ಕೆ ತರಗತಿಗಳಿಗೆ ಹಾಜರಾಗಲು ಸೂಚಿಸಿದೆ.
Updated: 19-12-2019
..............................................................
=>ಇದೇ ತಿಂಗಳು ನಡೆಯಲಿರುವ ಎಲ್ಲಾ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಗೊಂಡಿದ್ದು ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ವೇಳಾಪಟ್ಟಿಯನ್ನು ಸರಿಯಾಗಿ ಪರಿಶೀಲಿಸುವಂತೆ ಸೂಚಿಸಲಾಗಿದೆ.
Updated: 12-12-2019
..............................................................
=> ಇನಿಹಾ ನೆಟ್ ಸಂಸ್ಥೆಯಲ್ಲಿ ತರಬೇತಿ ಪಡೆದು ಪ್ರಮಾಣ ಪತ್ರ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಪ್ರಮಾಣ ಪತ್ರವನ್ನು ಇನಿಹಾ ನೆಟ್ ವೆಬ್ ನಲ್ಲಿ ಪರಿಶೀಲಿಸಬಹುದು ಹಾಗೆ Black & White ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ.
ವಿದ್ಯಾರ್ಥಿ ನೋಂದಣಿ ಸಂಖ್ಯೆ ಫೈಲ್ ಓಪನ್ ಪಾಸ್ವರ್ಡ್ ಆಗಿರುತ್ತದೆ.
(Path: Iniha Net web=> click Certified students list on Quick link menu. => Click download certificate)
Updated: 07-12-2019
..............................................................
=>ವಾರ್ಷಿಕ ಪರೀಕ್ಷೆ ಮುಗಿದ ಬಳಿಕ ಪ್ರಮಾಣ ಪತ್ರಕ್ಕಾಗಿ ಅರ್ಜಿಯನ್ನು ಕೂಡಲೇ ಸಲ್ಲಿಸುವಂತೆ ಸೂಚಿಸಲಾಗಿದೆ.
Updated: 07-12-2019
..............................................................
=>ನಾಳೆ ಥಿಯರಿ ಹಾಗೂ ಪ್ರಾಕ್ಟಿಕಲ್ ಪರೀಕ್ಷೆ ನಡೆಯಲಿದೆ.
Updated: 07-12-2019
..............................................................
=> ಮುಂದಿನ ವರ್ಷ ಎಪ್ರಿಲ್ ನಲ್ಲಿ "ಇನಿಹಾ ಕಿಡ್ ಮಾಡೆಲ್ ಅವಾರ್ಡ್" ನಡೆಯಲಿದ್ದು ಹೊಸ ಕಿಡ್ ಮಾಡೇಲ್ ಆಯ್ಕೆ ಪ್ರಕ್ರಿಯೆಯನ್ನು ಈ ಬಾರಿ ಇನಿಹಾ ನೆಟ್ ಸಂಸ್ಥೆಯ ಸಾಂಸ್ಕೃತಿಕಾ ವಿಭಾಗ ನಡೆಸಲಿದೆ. ಪ್ರಸ್ತುತ ವಿಟ್ಲದ "ಶ್ರದ್ಧಾ" ಇನಿಹಾ ಕಿಡ್ ಮಾಡೆಲ್ ಆಗಿದ್ದಾಳೆ.
Updated: 02-12-2019
..............................................................
=> ECM ನ ಮೇಲ್ವಿಚಾರಕರಾಗಿರುವ "ದೇವೇಶ್ ವೈ" ಇದೇ ಡಿಸೆಂಬರ್ ತಿಂಗಳಲ್ಲಿ ಇನಿಹಾ ನೆಟ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಲಿದ್ದಾರೆ. ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಪರಿಶೀಲಿಸಲಿದ್ದಾರೆ.
Updated: 02-12-2019
..............................................................
=> ಇದೇ ಡಿಸೆಂಬರ್ 8,15 ಕ್ಕೆ ಥಿಯರಿ ಹಾಗೂ ಪ್ರಾಕ್ಟಿಕಲ್ ಪರೀಕ್ಷೆಗಳು ನಡೆಯಲಿದ್ದು ಡಿಸೆಂಬರ್ 22 ಕ್ಕೆ ವಾರ್ಷಿಕ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಕಂಪ್ಯೂಟರ್ ತರಗತಿಗೆ ಕಡ್ಡಾಯವಾಗಿ ಹಾಜರಾಗಿ ಹಾಗೂ ಬಾಕಿ ಇರುವ ಕೋರ್ಸ್ ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ಪಾವತಿಸಿ.
Updated: 02-12-2019
..............................................................
=>ಶೈಕ್ಷಣಿಕ ಪ್ರವಾಸವನ್ನು ಮುಂದಿನ ವರ್ಷಗಳಲ್ಲಿ ಸ್ಥಗಿತಗೊಳಿಸಲು ಇನಿಹಾ ನೆಟ್ ಸಂಸ್ಥೆಯ ಪ್ರವಾಸ ನಿರ್ವಹಣಾ ಸಮಿತಿ ಚಿಂತನೆ ನಡೆಸಿದ್ದು ಸಂಸ್ಥೆಯ ಮುಖ್ಯಸ್ಥರಾದ ಕುಮಾರೇಶ್ ಅವರ ಅಂತಿಮ ನಿರ್ಧಾರದ ಮೇಲೆ ಅವಲಂಬಿಯಾಗಿದೆ. ಇತ್ತೀಚಿಗೆ ನಡೆದ ತುಮಕೂರು ಪ್ರವಾಸ ಇನಿಹಾ ನೆಟ್ ಸಂಸ್ಥೆಗೆ ಹೆಚ್ಚಿನ ಆರ್ಥಿಕ ನಷ್ಟ ತಂದಿದ್ದು ಮುಂದಿನ ಪ್ರವಾಸ ಆಯೋಜನೆಗೆ ಇದು ವ್ಯತಿರಿಕ್ತ ಪರಿಣಾಮ ಬೀರಿದೆ.
Updated: 27-11-2019

=>ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಪೋಷಕರು ದಿನಾಂಕ 23-11-2019 ರಂದು ಸಂಜೆ 7 ಗಂಟೆಗೆ ಸರಿಯಾಗಿ ಇನಿಹಾ ನೆಟ್ ಸಂಸ್ಥೆಗೆ ಹಾಜರಾಗಬೇಕು. ರಾತ್ರಿ 8 ಗಂಟೆಗೆ ಹೊರಡುವುದು. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Updated: 21-11-2019
..............................................................
=> ಇದೇ ಬರುವ ಭಾನುವಾರ ಅಂದರೆ 17-11-2019 ರಂದು ಇನಿಹಾ ನೆಟ್ ಸಂಸ್ಥೆಯಲ್ಲಿ ಶೈಕ್ಷಣಿಕ ಪ್ರವಾಸದ ಪೂರ್ವಭಾವಿ ಸಭೆ ನಡೆಯಲಿದೆ. ಈ ಸಭೆಗೆ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂಸ್ಥೆ ಮಾನ್ಯ ಮಾಡಲಾದ ವ್ಯಕ್ತಿಗಳು ಹಾಜರಾಗುವಂತೆ ಸೂಚಿಸಲಾಗಿದೆ.
Updated: 13-11-2019
..............................................................
=>ಸಾಂಸ್ಕೃತಿಕ ವಿಭಾಗದಿಂದ ಇನಿಹಾ ನೆಟ್ ಸಂಸ್ಥೆಯ 2019ನೇ ಸಾಲಿನ ಶೈಕ್ಷನಿಕ ಪ್ರವಾಸಕ್ಕೆ 2 ಸೀಟುಗಳು ಡೊನೇಟ್ ಆಗಿದ್ದು "ಇನಿಹಾ ನೆಟ್ ಸಂಸ್ಥೆಯ ಸಾಂಸ್ಕೃತಿಕ ಚಟುವಟಿಕೆಯಲ್ಲಿ" ಭಾಗವಹಿಸಿದ್ದ ಇಬ್ಬರು ವಿದ್ಯಾರ್ಥಿಗಳಿಗೆ 2019 ರ ಶೈಕ್ಷಣಿಕ ಪ್ರವಾಸಕ್ಕೆ ಉಚಿತ ಪ್ರವೇಶ ಸಿಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಮತ್ತು ಅರ್ಜಿ ಸಲ್ಲಿಸಲು ಸಾಂಸ್ಕೃತಿಕ ವಿಭಾಗದ ವೆಬ್ ಸೈಟ್ಗೆ ಹೋಗಿ. Click here
Updated: 08-11-2019
..............................................................
=>ಶೈಕ್ಷಣಿಕ ಪ್ರವಾಸಕ್ಕೆ ನೋಂದಣಿಯನ್ನು ನಾಳೆಯ ಒಳಗೆ ಮಾಡುವಂತೆ ಸೂಚಿಸಿದೆ. ನಾಳೆ ಸಂಜೆ 5 ಗಂಟೆಯವರೆಗೆ ನೋಂದಣಿ ಪ್ರಕ್ರಿಯೆ ಇರಲಿದ್ದು ಆದಷ್ಟು ಬೇಗ ನೋಂದಣಿಯನ್ನು ಮಾಡುವಂತೆ ಪ್ರವಾಸ ನಿರ್ವಹಣಾ ಸಮಿತಿ ಸೂಚನೆಯನ್ನು ನೀಡಿದೆ. ಹಾಗೆ ಪ್ರವಾಸ ಶುಲ್ಕವನ್ನು ನವೆಂಬರ್ 15 ರ ಒಳಗೆ ಪಾವತಿಸಬೇಕು. ಆನ್ಲೈನ್ ಯುಪಿಐ (ಫೋನ್ ಪೆ ಅಥವಾ ಗೂಗಲ್ ಪೇ) ಮೂಲಕವೂ ಪಾವತಿಸಬಹುದಾಗಿದೆ. ಈ ಬಗ್ಗೆ ಮಾಹಿತಿಯನ್ನು ಪ್ರವಾಸ ನಿರ್ವಹಣಾ ಸಮಿತಿಯ ವೆಬ್ಸೈಟ್ ಲ್ಲಿ ಪಡೆಯಿರಿ. _ (ಇಲ್ಲಿ ಕ್ಲಿಕ್ ಮಾಡಿ)
Updated: 05-11-2019
..............................................................
=>ಬಡ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಗೆ ಸಹಾಯವಾಗುತ್ತಿದ್ದ "ಗ್ರಾಮೋತ್ಥಾನ ಸೇವಾ ಸೆಂಟರ್ ನ" ಕಂಪ್ಯೂಟರ್ ತರಬೇತಿ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಅಧೀಕೃತ ಮಾಹಿತಿ ಲಭ್ಯವಾಗಿಲ್ಲ.
Updated: 30-10-2019
..............................................................
=>ಇನಿಹಾ ನೆಟ್ ಸಂಸ್ಥೆಯ ಶೈಕ್ಷಣಿಕ ಪ್ರವಾಸದ ನೋಂದಣಿಯ ಕೊನೆಯ ದಿನಾಂಕವನ್ನು ನವೆಂಬರ್ 6 ಕ್ಕೆ ಮುಂದೂಡಲಾಗಿದೆ. ಆದಷ್ಟು ಬೇಗ ವಿದ್ಯಾರ್ಥಿಗಳು ಹಾಗೆ ಪೋಷಕರು ನೋಂದಣಿ ಮಾಡುವಂತೆ ಪ್ರವಾಸ ನಿರ್ವಹಣಾ ಸಮಿತಿ ಸೂಚಿಸಿದೆ. [ Register here ]
Updated: 30-10-2019
..............................................................
=>ಇನಿಹಾ ನೆಟ್ ಸಂಸ್ಥೆ ಆಯೋಜಿಸಿರುವ ಸಾಂಸ್ಕೃತಿಕ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಸಾಧನೆಯ ಮಾಹಿತಿಯನ್ನು "ಸಾಂಸ್ಕೃತಿಕ ವಿಭಾಗದ ವೆಬ್ಸೈಟ್" ಗೆ ಅಪ್ಡೇಟ್ ಮಾಡಲು ಸೂಚಿಸಿದೆ.
Updated: 27-10-2019
..............................................................
=> ನಾಳೆ (27-10-2019) ನಡೆಯಬೇಕಿದ್ದ ಪರೀಕ್ಷೆಗಳಲ್ಲಿ "ಪ್ರಾಕ್ಟಿಕಲ್ ಪರೀಕ್ಷೆ" ಯನ್ನು ಮುಂದೂಡಲಾಗಿದೆ. ಆದರೆ ಥಿಯರಿ ಪರೀಕ್ಷೆಗಳು ನಡೆಯಲಿದ್ದು ವೇಳಾ ಪಟ್ಟಿಯಲ್ಲಿ ಸಮಯ ಬದಲಾಗಿರುತ್ತದೆ. ವೇಳಾ ಪಟ್ಟಿ (ಇಲ್ಲಿ ಕ್ಲಿಕ್ ಮಾಡಿ)
Updated: 26-10-2019
..............................................................
=>ನಾಳೆ (26-10-2019) ಮುಂದುವರಿದ ಮಳೆಯ ಕಾರಣ "ಇನಿಹಾ ನೆಟ್" ಸಂಸ್ಥೆಯ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ.
Updated: 25-10-2019
..............................................................
=>ಮುಂದಿನ ವರ್ಷ ಅಂದರೆ 2020 ನೇ ಸಾಲಿನ ಶೈಕ್ಷಣಿಕ ಪ್ರವಾಸವನ್ನು ರದ್ದು ಮಾಡುವ ನಿರ್ಧಾರವನ್ನು "ಪ್ರವಾಸ ನಿರ್ವಹಣಾ ಸಮಿತಿ" ತೀರ್ಮಾನಿಸಿದ್ದು ಸದ್ಯದಲ್ಲೇ ಇದರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಲಿದೆ. ಇನಿಹಾ ನೆಟ್ ಸಂಸ್ಥೆಯ ಬಹು ನಿರೀಕ್ಷಿತ ಕುತೂಹಲಕಾರಿಯಾಗಿರುವ "ಕಾಳಗುತ್ತು_ಪತ್ತೇದಾರಿ ಕಿರುಚಿತ್ರ"ದ ಚಿತ್ರೀಕರಣ ಹಾಗೂ ಮೇಕಿಂಗ್ ಗೆ 1 ವರ್ಷ ಸಮಯ ಬೇಕಾಗಿರುವ ಕಾರಣ "2020 ನೇ ವರ್ಷದ ಶೈಕ್ಷಣಿಕ ಪ್ರವಾಸ" ರದ್ದಾಗುವ ಸಾಧ್ಯತೆ ಇದೆ.
Updated: 25-10-2019
..............................................................
ವೇಳಾ ಪಟ್ಟಿ (ಇಲ್ಲಿ ಕ್ಲಿಕ್ ಮಾಡಿ)
Updated: 24-10-2019
..............................................................
=>ದಿನಾಂಕ 30-10-2019, ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಸಂಸ್ಥೆಯು ಮಾನ್ಯ ಮಾಡಲಾದ ವ್ಯಕ್ತಿಗಳಿಗೆ ನೋಂದಣಿ ಮಾಡಲು ಕೊನೆಯ ದಿನಾಂಕವಾಗಿದೆ. ಯಾವುದೇ ಕಾರಣಕ್ಕೂ ಕೊನೆಯ ದಿನಾಂಕವನ್ನು ಮುಂದೂಡಲು ಸಾಧ್ಯವಿಲ್ಲ. ಆದ್ದರಿಂದ ಪ್ರವಾಸಕ್ಕೆ ನೋಂದಣಿಯನ್ನು 30-10-2019ರ ಒಳಗೆ ಮಾಡಲು ಸೂಚಿಸಲಾಗಿದೆ.
Updated: 22-10-2019
..............................................................
No comments:
Post a Comment