=> ಟೈಮ್ ಆಫ್ ಟಾರ್ಗೆಟ್ ವಿಶೇಷ ಕಾರ್ಯಕ್ರಮದಲ್ಲಿ "ಮೇಜರ್ ಸಂದೀಪ್ ಉನ್ನಿಕೃಷ್ಣನ್ " ಅವರ ಬಗ್ಗೆ ಇರುವ ಪರಿಚಯಾತ್ಮಕ ಹಿನ್ನೆಲೆ ಧ್ಬನಿಗೆ "ಚಿತ್ತ ವಿಸ್ತಾರ (ಭಾರತೀಯ ಯೋಧರಿಗೆ ನಮನ)" ಕಾರ್ಯಕ್ರಮದ ಮುಖ್ಯ ನಿರೂಪಕಿಯಾಗಿ ಕಾಣಿಸಿಕೊಂಡಿದ್ದ ನಮ್ಮ ವಿದ್ಯಾರ್ಥಿನಿ "ಪ್ರಾರ್ಥನಾ ಐ.ಎ" ಗೆ ಅವಕಾಶವನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
Updated:24-02-2019
..............................................................
=> ದಿನಾಂಕ 24-02-2019 ಥಿಯರಿ ಪರೀಕ್ಷೆ ವೇಳಾ ಪಟ್ಟಿ
Updated:22-02-2019
..............................................................
=> ದಿನಾಂಕ 19-03-2019 ರಂದು ಇನಿಹಾ ನೆಟ್ ಸಂಸ್ಥೆಯ ವಿದ್ಯಾರ್ಥಿಗಳ 5ನೇ ವಿಶೇಷ ಕಾರ್ಯಕ್ರಮ "ಟೈಮ್ ಆಫ್ ಟಾರ್ಗೆಟ್" ಇದರ ಧ್ವನಿಮುದ್ರಣ ಹಾಗೂ ಚಿತ್ರೀಕರಣ ಮಂಗಳೂರಲ್ಲಿ ನಡೆಯಲಿದೆ.
Updated:20-02-2019
..............................................................
=> ದಿನಾಂಕ 24-02-2019 ರಂದು ಥಿಯರಿ ಪರೀಕ್ಷೆ ನಡೆಯಲಿದೆ. ವೇಳಾ ಪಟ್ಟಿಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.
Updated:20-02-2019
..............................................................
=> ಇಂದು (ಗುರುವಾರ ಫೆಬ್ರವರಿ 14) ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ನಾಳೆ ಇನಿಹಾ ನೆಟ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ಮೌನ ಪ್ರಾರ್ಥನೆ ನಡೆಯಲಿದೆ. ಎಲ್ಲಾ ವಿದ್ಯಾರ್ಥಿಗಳು ತಪ್ಪದೆ ಹಾಜರಾಗುವಂತೆ ಸೂಚಿಸಲಾಗಿದೆ.
Updated: 14 -02-2019
..............................................................
=> 2018 ನೇ ಸಾಲಿನ ಇನಿಹಾ ನೆಟ್ ಸಂಸ್ಥೆಯ ವಿದ್ಯಾರ್ಥಿಗಳೆಲ್ಲರೂ ನಾಳೆ ನಡೆಯಲಿರುವ ಸಂಸ್ಥೆಯ "3ನೇ " ವರ್ಷಾಚರಣೆ ಕಾರ್ಯಕ್ರಮಕ್ಕೆ ಬೆಳಗ್ಗೆ 9:00 ಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಕುರಿತಾಗಿ ಸಂಬಂಧ ಪಟ್ಟ ಸ್ಥಳೀಯ ಶಾಲಾ ಕಾಲೇಜುಗಳ ಮುಖ್ಯಸ್ಥರಲ್ಲಿ ವಿನಂತಿ ಮಾಡುವಂತೆ ನಮ್ಮ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ .
Updated: 10-02-2019
..............................................................
=> ಇನಿಹಾ ನೆಟ್ ಸಂಸ್ಥೆಯ ವರ್ಷಾಚರಣೆಯ ದಿನ ನಡೆಯಲಿರುವ ಸಾಂಸ್ಕೃತಿಕ ಚಟುವಟಿಕೆಗಳ ಪಟ್ಟಿ ಇಲ್ಲಿದೆ.
Updated: 09-02-2019
..............................................................
Updated: 04-02-2019
..............................................................
=> ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್(ರಿ.) ಸಂಸ್ಥೆಯ 3ನೇ ವರ್ಷಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಈಗಲೇ ನೋಂದಾವಣೆ ಮಾಡಿಕೊಳ್ಳಿ.
Updated: 02-02-2019
..............................................................
=> ಕಣಿಯೂರು ಗ್ರಾಮ ಪಂಚಾಯತ್ ನ ಗ್ರಾಮ ಸಭೆ 11-02-2019 ರಂದು ಇದ್ದ ಕಾರಣ, ಅಧ್ಯಕ್ಷರಾದ "ಶ್ರೀ ಸುನೀಲ್ ಸಾಲ್ಯಾನ್" ರವರು ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್(ರಿ.) ಸಂಸ್ಥೆಯ 3ನೇ ವರ್ಷಾಚರಣೆಯ ಸಭಾಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ. ಇದೀಗ ಸಭಾಕಾರ್ಯಕ್ರಮವನ್ನು ನಡೆಸಲು ಅಧ್ಯಕ್ಷರ ಅವರ ಅನುಮತಿ ದೊರಕಿದ್ದು ಸಭಾಧ್ಯಕ್ಷತೆಯನ್ನು "ಶ್ರೀ ರಾಜೀವ ರೈ (ನಿವೃತ್ತ ಬ್ಯಾಂಕ್ ಅಧಿಕಾರಿ)" ಇವರು ವಹಿಸಿಕೊಳ್ಳಲಿದ್ದಾರೆ.
Updated: 01-02-2019
..............................................................
=> ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್(ರಿ.) ಸಂಸ್ಥೆಯ 3ನೇ ವರ್ಷಾಚರಣೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸುತ್ತಿರುವ “ಹುತಾತ್ಮ ಯೋಧ ಏಕನಾಥ್ ಶೆಟ್ಟಿ” ಅವರ ಧರ್ಮಪತ್ನಿ “ಶ್ರೀಮತಿ ಜಯಂತಿ” ಇವರಿಗೆ ಗೌರವಪೂರ್ಣ ಸ್ವಾಗತ.
Updated: 31-01-2019
..............................................................
=> 2018 ನೇ ಸಾಲಿನಲ್ಲಿ "A" ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ (ಪ್ರಮಾಣ ಪತ್ರ ಪಡೆದ) ವಿದ್ಯಾರ್ಥಿಗಳ ವಿವರ- (Click here)
Updated: 31-01-2019
..............................................................
=> ಇನಿಹಾ ನೆಟ್ ಸಂಸ್ಥೆಯ ಮೂರನೇ ವರ್ಷಾಚರಣೆಯ ಸಮಾರಂಭದಲ್ಲಿ ಅಭಿನಂದನಾ ಪ್ರಶಸ್ತಿ ಪಡೆಯಲಿರುವ ವಿದ್ಯಾರ್ಥಿಗಳ (ಸಂಸ್ಥೆಯ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು) ವಿವರ ಇಲ್ಲಿದೆ- (Click here) ಹಾಗೆ 2018 ನೇ ಸಾಲಿನಲ್ಲಿ "A" ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ (ಪ್ರಮಾಣ ಪತ್ರ ಪಡೆದ) ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಈ ವಿದ್ಯಾರ್ಥಿಗಳ ವಿವರವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. ಪ್ರಶಸ್ತಿ ಸ್ವೀಕರಿಸಲಿರುವ ವಿದ್ಯಾರ್ಥಿಗಳು & ಅವರ ಪೋಷಕರು ಸಮಾರಂಭಕ್ಕೆ ತಪ್ಪದೇ ಬರುವಂತೆ ಸೂಚಿಸಲಾಗಿದೆ.
Updated: 27-01-2019
..............................................................
Updated: 24-01-2019
..............................................................
=> ತುರ್ತು ಅಧಿಸೂಚನೆ...
ಭಾನುವಾರ ನಡೆಯಲಿರುವ ವಾರ್ಷಿಕ ಪ್ರಾಕ್ಟಿಕಲ್ ಪರೀಕ್ಷೆಯನ್ನು ಇನಿಹಾ ನೆಟ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಸೂಚನೆಯಂತೆ "ಶನಿವಾರ" (26-01-2018 ಕ್ಕೆ) ನಡೆಸಲು ಪರೀಕ್ಷಾ ಸಮಿತಿ ತೀರ್ಮಾನಿಸಿರುತ್ತದೆ.
* ಈ ಬಗ್ಗೆ ಕೂಡಲೇ ನಿಮ್ಮ ಕಂಪ್ಯೂಟರ್ ಶಿಕ್ಷಕರನ್ನು ಸಂಪರ್ಕಿಸಿ.
* ವೇಳಾ ಪಟ್ಟಿಯನ್ನು ಶೀಘ್ರದಲ್ಲೇ ನೀಡಲಾಗುವುದು.
Updated: 21-01-2019
..............................................................
=> ಭಾನುವಾರ (20-01-2018) ನಡೆಯಬೇಕಿದ್ದ ಪ್ರಾಕ್ಟಿಕಲ್ ಪರೀಕ್ಷೆಯನ್ನು ದಿನಾಂಕ 27-01-2018 ಕ್ಕೆ ಮುಂದೂಡಲಾಗಿದೆ. ಹೆಚ್ಚಿನ ವಿವರಗಳಿಗೆ ನಿಮ್ಮ ಕಂಪ್ಯೂಟರ್ ಶಿಕ್ಷಕರನ್ನು ಸಂಪರ್ಕಿಸಿ
Updated: 18-01-2019
..............................................................
=> ಉರಿ (ದ ಸರ್ಜಿಕಲ್ ಸ್ಟ್ರೈಕ್) ಹಿಂದಿ ಚಲನ ಚಿತ್ರವನ್ನು ವೀಕ್ಷಣೆ ಮಾಡುವಂತೆ ಸೂಚಿಸಲಾಗಿದೆ. ನಮ್ಮ ಭಾರತೀಯ ಯೋಧರು ಪಾಕಿಸ್ತಾನದ ಗಡಿ ದಾಟಿ ಉಗ್ರರ ನೆಲೆಗಳನ್ನು ದ್ವಂಸ ಮಾಡಿದ ಸಾಹಸದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
Updated: 18-01-2019
..............................................................
=> ಜನವರಿ 20, 2019 ರಂದು Final Practical Examination
ನಡೆಯಲಿದೆ
Updated: 10-01-2019
..............................................................
=> ಚಿತ್ತ ವಿಸ್ತಾರ (ಹಿಂದಿ) ಕಾರ್ಯಕ್ರಮಕ್ಕೆ ಸಂಬಂಧಿಸಿದ ಪೂರ್ವತಯಾರಿಯನ್ನು ನಡೆಸಲು ಇನಿಹಾ ನೆಟ್ ಸಂಸ್ಥೆಯ ಸಾಂಸ್ಕೃತಿಕ ವಿಭಾಗಕ್ಕೆ ಸೂಚಿಸಲಾಗಿದೆ.
Updated: 10-01-2019
..............................................................
=> ಸಂಸ್ಥೆಯ ನಿದೇಶಕರಿಗೆ ಸೂಚನೆ, ಇದೇ ಭಾನುವಾರ ರೈತ ಬಂಧು ಮಾರುತಿಪುರಕ್ಕೆ ಭೇಟಿಕಾರ್ಯಕ್ರಮಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಆಸಕ್ತಿ ಇರುವವರನ್ನು ಮತ್ತು ಅವರ ಪೋಷಕರ ಅನುಮತಿ ಇರುವವರನ್ನು ಮಾತ್ರ ಕರೆದುಕೊಂಡು ಹೋಗಿ.
Updated: 10-01-2019
..............................................................
=> Final list of Visiting program (Raithabandhu marutipura)
Updated: 09-01-2019
..............................................................
=> ನಾಳಿನ (06-01-2019) ಪ್ರಾಕ್ಟಿಕಲ್ ಪರೀಕ್ಷೆಯ ವೇಳಾಪಟ್ಟಿ ಲಭ್ಯವಿದೆ.
Updated: 05-01-2019
..............................................................
=> ನಾಳೆ (04-01-2019) ಮೇಲ್ವಿಚಾರಕರಾದ "ಸಿದ್ದರಾಜು " ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಗೆ ಭೇಟಿ ನೀಡಲಿದ್ದಾರೆ .
Updated: 03-01-2019
..............................................................
=> Tally ERP9 (With GST) ಕೋರ್ಸ್ ಪೂರ್ಣವಾಗಿಲ್ಲದ ವಿದ್ಯಾರ್ಥಿಗಳು ರಿ-ಅಡ್ಮೀಷನ್ ಮೂಲಕ ಕಲಿಯಲು ಅವಕಾಶ ಕಲ್ಪಿಸಲಾಗಿದೆ. Application Here
Updated: 02-01-2019
..............................................................
=> ರೈತ ಬಂಧು ಮಾರುತಿಪುರಕ್ಕೆ ಭೇಟಿ ಕಾರ್ಯಕ್ರಮ ಜನವರಿ 15 ಕ್ಕೆ ನಿಗದಿಯಾಗಿದ್ದು, ಆಸಕ್ತಿ ಇರುವ ವಿದ್ಯಾರ್ಥಿಗಳು ಈ ಕೂಡಲೇ ಆನ್‌ಲೈನ್ ಮೂಲಕ ನೋಂದಾವಣೆ ಮಾಡಿಕೊಳ್ಳಿ. Registration Here
Updated: 30-12-2018
..............................................................
=> ಈಗಾಲೆ ಪ್ರಾಕ್ಟಿಕಲ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಬೇಕೆಂದು ಸೂಚಿಸುತ್ತೇವೆ.
Updated: 30-12-2018
..............................................................
=> ಉಚಿತ ಫೋಟೋಶಾಪ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಈ ಭಾನುವಾರ [30-12-2018] ಪ್ರಾಯೋಗಿಕ ಡಿಸೈನ್ (ಪರೀಕ್ಷೆ) ನಡೆಯಲಿದೆ.
Updated: 28-12-2018
..............................................................
=> ಇನಿಹಾ ನೆಟ್ ಸಂಸ್ಥೆಯ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ “ಕುಮಾರೇಶ್” 2019 ರ ಜೂನ್ ಅಂತ್ಯದಲ್ಲಿ ವರ್ಗಾವಣೆಗೊಳ್ಳಲಿದ್ದಾರೆ. ಇವರ ಸ್ಥಾನಕ್ಕೆ ಹೊಸ ಸಹಾಯಕ ನಿರ್ದೇಶಕರಾಗಿ “ಲಾವಣ್ಯ” ಮುಂದುವರೆಯಲಿದ್ದಾರೆ.
Updated: 26-12-2018
..............................................................
=> ಉಚಿತ ಯೋಜನೆಯಡಿಯಲ್ಲಿ ಫೋಟೋಶಾಪ್ ಕಲಿಯುತ್ತಿರುವ ವಿದ್ಯಾರ್ಥಿಗಳ ಜೊತೆ ನಮ್ಮ ಮೇಲ್ವಿಚಾರಕರು ಕಲಿಕೆಯ ಬಗ್ಗೆ ಮಾಹಿತಿಯನ್ನು ನಾಳೆ (21-12-2018) ವಿದ್ಯಾರ್ಥಿಗಳಿಂದಲೇ ಪಡೆಯಲಿದ್ದಾರೆ.
Updated: 20-12-2018
..............................................................
=> 25-12-2018 ರಂದು “ಇನಿಹಾ ನೆಟ್ ಸಂಸ್ಥೆಯಲ್ಲಿ” ಕಂಪ್ಯೂಟರ್ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದ “ಲೀಲಾವತಿ” ಇವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇನಿಹಾ ನೆಟ್ ಸಂಸ್ಥೆಯಲ್ಲಿ ಮದ್ಯಾಹ್ನ 2 ಗಂಟೆಗೆ ನಡೆಯಲಿದೆ.
Updated: 20-12-2018
..............................................................
=> 24-12-2018 ರಂದು ಪದವಿ ಪೂರ್ವ ಕಾಲೇಜು ಪದ್ಮುಂಜದಲ್ಲಿ ಗ್ರಾಮೋತ್ಥಾನ ಸೇವಾ ಸೆಂಟರ್ ಉರುವಾಲು ಇದರ ಸಹಯೋಗದಲ್ಲಿ ಮದ್ಯಾಹ್ನ 2 ಗಂಟೆಗೆ “ಕಂಪ್ಯೂಟರ್ ಶಿಕ್ಷಣ” ಮಾಹಿತಿ ಕಾರ್ಯಕ್ರಮ ನಡೆಯಲಿದೆ.
Updated: 20-12-2018
..............................................................
=> 23-12-2018 ರಿಂದ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇನಿಹಾ ನೆಟ್ ವಿದ್ಯಾರ್ಥಿಗಳಿಗೆ ಕಾಲೇಜು ಪರೀಕ್ಷೆ ಮುಗಿಯುವವರೆಗೆ ರಜೆ ನೀಡಲಾಗಿದೆ.
Updated: 20-12-2018
..............................................................
=> 16-12-2018 ರಂದು ನಡೆದ ವಾರ್ಷಿಕ ಪ್ರಾಕ್ಟಿಕಲ್ ಪರೀಕ್ಷೆಯ ಫಲಿತಾಂಶ ನಾಳೆ ಪ್ರಕಟಿಸಲಾಗುವುದು.
Updated: 20-12-2018
..............................................................
=> ಇದೇ ಬರುವ ಭಾನುವಾರ (23-12-2018) ಪ್ರಾಕ್ಟಿಕಲ್ ಪರೀಕ್ಷೆ ನಡೆಯಲಿದೆ. ವೇಳಾ ಪಟ್ಟಿಯನ್ನು ನಾಳೆ ಅಪ್ಡೇಟ್ ಮಾಡಲಾಗುತ್ತದೆ.
Updated: 20-12-2018
..............................................................
..............................................................
=> ನಾಳಿನ ವಾರ್ಷಿಕ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ಯಾರ ಶುಲ್ಕ ಪಾವತಿ ಬಾಕಿ ಇದೆಯೋ ಅವರು ಈ ಕೂಡಲೇ ಇಸಿಎಂ ಗೆ Payment confirmation ಅರ್ಜಿ ಸಲ್ಲಿಸಿ ಪರೀಕ್ಷೆಗೆ ಹಾಜರಾಗಲು ಸೂಚಿಸಿದೆ.
..............................................................
No comments:
Post a Comment