ಸಾಂಸ್ಕೃತಿಕ ವಿಭಾಗದ ವಿಲೀನ; ಖುಷಿಯಿಂದ ಕೊನೆಯ ಕಾರ್ಯಕ್ರಮವಾಗುತ್ತಾ?

ಹೌದು, ಇದು ಇನಿಹಾ ನೆಟ್ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ಅಂತನೇ ಹೇಳಬಹುದು. ಸಾಂಸ್ಕೃತಿಕ  ಚಟುವಟಿಕೆಗಳ ಮೂಲಕ ಪ್ರಸಿದ್ದಿ ಪಡೆದಿರುವ ಇನಿಹಾ ನೆಟ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆ, ಇದೀಗ ತನ್ನ ಅಂಗ ಸಂಸ್ಥೆಯಾದ “ಸಾಂಸ್ಕೃತಿಕ  ವಿಭಾಗವನ್ನು” ವಿಲೀನ ಮಾಡುವ ಯೋಚನೆಯಲ್ಲಿದೆ. ಹೀಗೆನಾದರೂ ಆಗಿದ್ದಲ್ಲಿ ಖುಷಿಯಿಂದ ಕಾರ್ಯಕ್ರಮ ಇನಿಹಾ ನೆಟ್ ವಿದ್ಯಾರ್ಥಿಗಳ ಕೊನೆಯ ಕಾರ್ಯಕ್ರಮವಾಗಲಿದೆ. ಈ ಬಗ್ಗೆ ಮೊದಲು ಹಳೆ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಸಂಗ್ರಹಿಸಿ ನಂತರ ಸಂಸ್ಥೆಗೆ ಸಹಕರಿಸಿದ ವಿದ್ಯಾರ್ಥಿ ಪೋಷಕರ ಅಭಿಪ್ರಾಯ ಪಡೆದು ನಿರ್ಧಾರಕ್ಕೆ ಬರುವುದಾಗಿ ಸಂಸ್ಥೆಯ ನಿರ್ದೇಶಕರು ಹೇಳಿದ್ದಾರೆ.

ಯಾಕೆ ಈ ನಿರ್ಧಾರ?
ಇನಿಹಾ ನೆಟ್ ಸಂಸ್ಥೆಯಲ್ಲಿ ಒಟ್ಟು 3 ಅಂಗ ಸಂಸ್ಥೆಗಳಿದೆ. ಇಸಿಎಂ, ಟೂರ್ ನಿರ್ವಹಣಾ ಸಮಿತಿ ಮತ್ತು ಸಾಂಸ್ಕೃತಿಕ  ವಿಭಾಗ. ಈ ಮೂರು ವಿಭಾಗ ಮೇಲ್ವಿಚಾರಕರ ನಿರ್ವಹಣೆಯಲ್ಲಿದ್ದರೂ ಸಾಂಸ್ಕೃತಿಕ  ವಿಭಾಗದ ಹೆಚ್ಚು ಜವಾಬ್ದಾರಿ ಸಂಸ್ಥೆಯ ನಿರ್ದೇಶಕರಾದ  ಕುಮಾರೇಶ್ ಅವರ ಮೇಲೆ ಇದೆ. ಅಂದರೆ ವಿದ್ಯಾರ್ಥಿಗಳನ್ನು ಸೆಟ್ ಮಾಡಿ, ಕಾರ್ಯಕ್ರಮದ ಸ್ಕ್ರಿಪ್ಟ್ ತಯಾರಿಕೆ, ಮಕ್ಕಳಿಗೆ ಪ್ರಾಕ್ಟೀಸ್, ರೇಡಿಯೋ ಸಾರಂಗ್ ಸ್ಟುಡಿಯೋಗೆ ಕರೆದುಕೊಂಡು ಹೋಗುವುದು ಹಾಗೆ ಅಲ್ಲಿ ಚಿತ್ರೀಕರಣವಾದದನ್ನು ತಂದು ಸಂಕಲನ ಮಾಡುವುದು ಎಲ್ಲಾ ಕೆಲಸವನ್ನು ಸಂಸ್ಥೆಯ ನಿರ್ದೇಶಕರೊಬ್ಬರೇ ಮಾಡುತ್ತಿದ್ದಾರೆ. ಅದಲ್ಲದೇ ಅವರು ಸದ್ಯ ಬೆಂಗಳೂರಿನ ಪೋಲೋಸ್ಟಾರ್ ಕಂಪನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿರುವ ಕಾರಣ ಸಾಂಸ್ಕೃತಿಕ  ವಿಭಾಗದ ನಿರ್ವಹಣೆ ಕಷ್ಟವಾಗುತ್ತಿದೆ ಎನ್ನುವ ಅಭಿಪ್ರಾಯ ಅವರಲ್ಲಿದೆ.

ಹಳೆ ವಿದ್ಯಾರ್ಥಿಗಳಿದೆ ಸೂಪರ್ ಪವರ್!
ಹೌದು, ಇನಿಹಾ ನೆಟ್ ಸಂಸ್ಥೆಯ “ಸಾಂಸ್ಕೃತಿಕ  ಚಟುವಟಿಕಾ ವಿಭಾಗವನ್ನು” ವಿಲೀನಗೊಳಿಸದಂತೆ ಹಾಗೂ ಮುಂದುವರೆಸಿಕೊಂಡು ಹೋಗುವಂತೆ ಮಾಡಲು ಇನಿಹಾ ನೆಟ್ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಿಗೆ ಅಂದರೆ ಇನಿಹಾ ನೆಟ್ ಸಾಂಸ್ಕೃತಿಕ  ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಸಾಧ್ಯವಿದೆ. ಅಂದರೆ ಸಂಸ್ಥೆಯು ಇದೇ ಭಾನುವಾರ ಕರೆದ ಸಭೆಯಲ್ಲಿ “ಸಾಂಸ್ಕೃತಿಕ  ಚಟುವಟಿಕಾ ವಿಭಾಗದ” ಪರವಾಗಿ ಓಟ್ ಮಾಡಿದ್ರೆ ವಿಲೀನ ಮಾಡಲು ಕಷ್ಟವಾಗುತ್ತದೆ. ಅಲ್ಲದೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಒಟ್ಟಿನಲ್ಲಿ “ಸಾಂಸ್ಕೃತಿಕ  ಚಟುವಟಿಕಾ ವಿಭಾಗವನ್ನು” ವಿಲೀನ ಮಾಡದೇ ಮುಂದೆ ಬರುವ ವಿದ್ಯಾರ್ಥಿಗಳಿಗೂ ಅವಕಾಶ ಸಿಗಲಿ ಅಂತ ನಾವೂ ಆಶಿಸುತ್ತಿದ್ದೇವೆ.

-ಮೇಲ್ವಿಚಾರಕರು, ಇಸಿಎಂ

1 comment:

  1. Caltural program continue agbeku yakandre kumaresh sir avaru tumbane program madidare adrali makkalu tumbane improve agidare so hagagi innu munde kudaa e program continue agbeku iniha netge baruva student's innu kuda improve agbeku

    ReplyDelete